ದೆಹಲಿ ಹೈಕೋರ್ಟ್ : ವಿಶ್ವಕಪ್ ಪಂದ್ಯಗಳ ಅನಧಿಕೃತ ಪ್ರಸಾರ, ಸ್ಟ್ರೀಮಿಂಗ್ಗೆ ನಿರ್ಬಂಧ
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಯಾವುದೇ ಭಾಗವನ್ನು ಅನುಮತಿ ಅಥವಾ ಪರವಾನಗಿ ಇಲ್ಲದೆ ಪ್ರಸಾರ ಹಾಗೂ ಸ್ಟ್ರೀಮಿಂಗ್ ಮಾಡುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ. ಮುಂಬರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯನ್ನು ಅನಧಿಕೃತವಾಗಿ ಪ್ರಸಾರ ಹಾಗೂ ಸ್ಟ್ರೀಮಿಂಗ್ ಮಾಡದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿ ಮಹತ್ವದ ಆದೇಶ ಹೊರಡಿಸಿದೆ.ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ವಿಶ್ವಕಪ್‌ನಂತಹ ವಿವಿಧ ಐಸಿಸಿ ಕಾರ್ಯಕ್ರಮಗಳ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳು ಸೇರಿದಂತೆ ವಿಶೇಷ ಜಾಗತಿಕ ಮಾಧ್ಯಮ ಹಕ್ಕುಗಳನ್ನು ನಾವು […]