ಜ್ಯೂರಿಚ್ ಡೈಮಂಡ್ ಲೀಗ್​: ಮತ್ತೊಂದು ಚಿನ್ನದ ಪದಕಕ್ಕೆ ನೀರಜ್ ಚೋಪ್ರಾ ಹೆಜ್ಜೆ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಮುಕ್ತಾಯ ಕಂಡ ಬೆನ್ನಲ್ಲೇ ಜ್ಯೂರಿಚ್ ಡೈಮಂಡ್ ಲೀಗ್​ ನಡೆಯಲಿದ್ದು, ಅಥ್ಲೆಟಿಕ್ಸ್ ಅಭಿಮಾನಿಗಳು ನೀರಜ್‌ ಚೋಪ್ರಾ ಪ್ರದರ್ಶನ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿರುವ ಜಾವೆಲಿನ್‌ ಆಟಗಾರ ನೀರಜ್​ ಚೋಪ್ರಾ ಸೇರಿದಂತೆ ನೋಹ್ ಲೈಲ್ಸ್, ಶಾಕ್ಯಾರಿ ರಿಚರ್ಡ್‌ಸನ್, ಕಾರ್ಸ್ಟನ್ ವಾರ್‌ಹೋಮ್ ಮತ್ತು ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಜ್ಯೂರಿಚ್ ಡೈಮಂಡ್ ಲೀಗ್​ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಗೆಲುವಿಗಾಗಿ ತಯಾರಿ ನಡೆಸುತ್ತಿದ್ದಾರೆ.ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾ, ಜ್ಯೂರಿಚ್ […]