ಉಡುಪಿ: ಹೊಸ ವರ್ಷಾಚರಣೆಗೆ ಕಡ್ಡಾಯ ನಿಯಮ; ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ

ಉಡುಪಿ: ಇನ್ನೇನು 2022 ಕ್ಕೆ ವಿದಾಯ ಹೇಳಲಿದ್ದು, 2023 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂದಿದ್ದ ಜನರಿಗೆ ಕೋವಿಡ್ ಮತ್ತೊಮ್ಮೆ ಆಘಾತವನ್ನುಂಟು ಮಾಡಿದೆ. ಜಗತ್ತಿನಾದ್ಯಂತ ಕೋವಿಡ್ ಬಗ್ಗೆ ಹೆಚ್ಚಿರುವ ಆತಂಕದಿಂದಾಗಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮಗಳನ್ನು ಜನವರಿ ಮಧ್ಯರಾತ್ರಿ 1 ಗಂಟೆಯೊಳಗೆ ಮುಕ್ತಾಯಗೊಳಿಸುವಂತೆ ರಾಜ್ಯ ಸರ್ಕಾರವು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿಗಳು: ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಜನವರಿ 1 ರ ಮಧ್ಯರಾತ್ರಿಯೊಳಗೆ ಮುಕ್ತಾಯಗೊಳಿಸಬೇಕು. […]