ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಿಗೆ ಹೊಸ ಮಾರ್ಗಸೂಚಿ: ನಾಳೆಯಿಂದ (ಅ.1) ಜಾರಿ
ನವದೆಹಲಿ: ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ ಪೇಮೆಂಟ್ ಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವುದಕ್ಕಾಗಿ ಆರ್ ಬಿಐ ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಅ.1 ರಿಂದ ಇವುಗಳು ಜಾರಿಗೆ ಬರಲಿವೆ. ಗ್ರಾಹಕರೇ ಕೇಳದ ಹೊರತು ಕಾರ್ಡ್ ಗಳಿಗೆ ಅಂತಾರಾಷ್ಟ್ರೀಯ ಸೌಲಭ್ಯವನ್ನು ಕಲ್ಪಿಸುವಂತಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರಿಗೆ ತಮಗೆ ಯಾವೆಲ್ಲಾ ಸೇವೆಗಳು ಬೇಕು-ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಅವಕಾಶ […]