ಕಾರ್ಕಳದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲು ನನ್ನ ಜೊತೆಯಾಗಿ: ಮುನಿಯಾಲು ಉದಯ ಶೆಟ್ಟಿ
ಕಾರ್ಕಳ: ಕಾರ್ಕಳಕ್ಕೆ ಬೇಕಿರುವುದು ಆಡಂಭರ ತೋರಿಕೆಯಲ್ಲ.ಸಹಜ ಸುಂದರ ಅಭಿವೃದ್ಧಿ, ಈ ಊರಿನ ಸೊಗಡನ್ನು ಹಾಳು ಮಾಡದಂತಹ,ಇಲ್ಲಿನ ಜನರ ಬದುಕಿಗೆ ಭರವಸೆ ಕೊಡುವ ಕೆಲಸಗಳು ಕಾರ್ಕಳಕ್ಕೆ ಬೇಕು.ಅಂತಹ ಅಭಿವೃದ್ಧಿಯ ಪರಿಕಲ್ಪನೆಗಳು ನನ್ನಲ್ಲಿವೆ.ಆ ಪರಿಕಲ್ಪನೆಯ ಸಾಕಾರಕ್ಕಾಗಿ ಈ ಸಲ ಕಾರ್ಕಳದಲ್ಲಿ ನನ್ನನ್ನು ಬೆಂಬಲಿಸಿ,ನನ್ನ ಕನಸುಗಳಿಗೆ ಜೊತೆಯಾಗಿ ಎಂದು ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ. ಕಾರ್ಕಳವನ್ನು ಶಿಕ್ಷಣ ಕಾಶಿ ಮಾಡುವೆ: ಕಾರ್ಕಳ ವಿಧಾನಾಸಭಾ ಕ್ಷೇತ್ರದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಸರಕಾರಿ ಮೆಡಿಕಲ್ ಕಾಲೇಜು, ಪ್ಯಾರಾಮೆಡಿಕಲ್, ನರ್ಸಿಂಗ್ […]