ಅಯೋಧ್ಯೆಗೆ ಬಂದವು ನೇಪಾಳದ ಶಾಲಿಗ್ರಾಮ ಶಿಲೆಗಳು
ಅಯೋಧ್ಯಾ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಭವ್ಯ ದೇಗುಲಕ್ಕೆ ನೇಪಾಳದಿಂದ ಬಂದ ಶಾಲಿಗ್ರಾಮ ಶಿಲೆಗಳನ್ನು ಪ್ರಧಾನ ಅರ್ಚಕ ಯೋಗಿ ಕಮಲ್ ನಾಥ್ ಜೀ ಅವರು ಧಾರ್ಮಿಕ ವಿಧಿ ಪ್ರಕಾರ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣದಲ್ಲಿ ಮುಂದಿನ ಪ್ರಯಾಣಕ್ಕೆ ಕಳುಹಿಸಿದರು.
ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿಯಾಗಿ ಕಂಗೊಳಿಸಿದ ನೇಪಾಳದ ಸೊಫಿಯಾ ಭುಜೆಲ್
ನ್ಯೂ ಓರ್ಲಿಯನ್ಸ್‌ನಲ್ಲಿ ಅರ್ನೆಸ್ಟ್ ಎನ್. ಮೋರಿಯಲ್ ಕನ್ವೆನ್ಷನ್ ನಲ್ಲಿ ನಡೆಯುತ್ತಿರುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಸ್ ಯೂನಿವರ್ಸ್ ನೇಪಾಳ ಸೋಫಿಯಾ ಭುಜೆಲ್ ಮಿಸ್ ಯೂನಿವರ್ಸ್ 2023 ವೇದಿಕೆಯಲ್ಲಿ ‘ಶಕ್ತಿ’ (ದುರ್ಗಾ) ರೂಪದಲ್ಲಿ ಕಂಗೊಳಿಸಿದ್ದಾರೆ. ನೇಪಾಳದಲ್ಲಿ ಶಾಕ್ತ್ಯ ಪರಂಪರೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದು ಇಲ್ಲಿ ಶಕ್ತಿ ಉಪಾಸನೆ ಬಹಳ ಮಹತ್ವಪೂರ್ಣವಾಗಿದೆ. ನೇಪಾಳದ ಪರಂಪರೆಯನ್ನು ತನ್ನ ವಸ್ತ್ರದಲ್ಲಿ ಬಿಂಬಿಸಿರುವ ಸೋಫಿಯಾ ಭುಜೆಲ್ ನೇಪಾಳದ ಹಿಂದೂ ಸಂಸ್ಕೃತಿಯನ್ನು ಪತಿನಿಧಿಸಿದ್ದಾರೆ. Nepal, the endangered #Hindurashtra that always takes pride in its […]
ನೇಪಾಳದಲ್ಲಿ 5.1 ತೀವ್ರತೆಯ ಭೂಕಂಪ: ಬಿಹಾರದ ಕೆಲವು ಭಾಗಗಳಲ್ಲಿ ಕಂಪನ
ಕಠ್ಮಂಡು: ಕಠ್ಮಂಡುವಿನ ಪೂರ್ವಕ್ಕೆ 53 ಕಿ.ಮೀ ದೂರದಲ್ಲಿ ಬುಧವಾರ ಮಧ್ಯಾಹ್ನ 2.52ರ ಸುಮಾರಿಗೆ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಭೂಮಿಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಪಾಟ್ನಾ ಸೇರಿದಂತೆ ಬಿಹಾರದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪಾಟ್ನಾ ಘಟಕ ತಿಳಿಸಿದೆ.
ನೇಪಾಳದ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ! ಪಾರ್ಟಿ ವಿಡಿಯೋ ವೈರಲ್!!
ದೆಹಲಿ: ಮಂಗಳವಾರ ವಿದೇಶಿ ನೈಟ್‌ಕ್ಲಬ್‌ಗೆ ಭೇಟಿ ನೀಡಿದ ವೀಡಿಯೊ ಕಾಣಿಸಿಕೊಂಡ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಹುಲ್ ನೈಟ್ ಕ್ಲಬ್ ನಲ್ಲಿರುವ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಕರೆತರುವ ಪಕ್ಷದ ಪ್ರಯತ್ನ ವಿಫಲವಾಗಿರುವ ಈ ಸಮಯದಲ್ಲಿ ರಾಹುಲ್ ಪಾರ್ಟಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಆದರೆ, ಇದು ರಾಹುಲ್ ಅವರ ರಹಸ್ಯ ಭೇಟಿಯಲ್ಲ, ಅವರು ಒಂದು ಮದುವೆ […]