ಉಡುಪಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ನೀಲಾವರ ಗೋಶಾಲೆ ಸ್ವಚ್ಛತೆ, ಗೋ ಪೂಜೆ
ಉಡುಪಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಹಾಗೂ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇದ ಕಾಯ್ದೆಯನ್ನು ಸ್ವಾಗತಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ನೀಲಾವರ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ನೆರವೇರಿಸಲಾಯಿತು. ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಜನನಾಯಕ ಮಾತ್ರವಲ್ಲ, ಅವರು ವಿಶ್ವಮಾನವರಾಗಿದ್ದರು. ಅದಕ್ಕೆ ಅವರ ಸರಳ ವ್ಯಕ್ತಿತ್ವವೇ ಸಾಕ್ಷಿ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದ ಅವರನ್ನು ಅಜಾತ ಶತ್ರು ಎಂದು ದೇಶದ […]