ಸಾಮಾಜಿಕ ಸೇವೆಯಲ್ಲಿ ಕ್ರಿಯಾಶೀಲತೆ ಅಗತ್ಯ: ಡಾ. ಕೃಷ್ಣ ಪ್ರಸಾದ್
ಉಡುಪಿ: ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಅದರಲ್ಲಿ ತೊಡಗಿಕೊಳ್ಳಲು ವ್ಯಕ್ತಿ ಆರ್ಥಿಕವಾಗಿ ಸದೃಢನಾಗಬೇಕಿಲ್ಲ. ಆತನಿಗೆ ಪ್ರಾಮಾಣಿಕ ಸೇವಾ ಮನೋಭಾವ ಮತ್ತು ಆಸಕ್ತಿ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೂಡ ಸಾಮಾಜಿಕ ಕೆಲಸಗಳನ್ನು ಸಂಯೋಜಿಸಿಕೊಳ್ಳಬಹುದು. ಹಾಗೆ ಆ ಮೂಲಕ ಸಮಾಜಕ್ಕೆ ತಾನು ನೀಡಿದ ಕೊಡುಗೆಗಳಿಂದ ಆತ್ಮಸಂತೃಪ್ತಿ ಪಡೆದುಕೊಳ್ಳಬಹುದು ಎಂದು ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟರು. ಉಡುಪಿ ಇಂದ್ರಾಳಿಯ ಕಾಮಾಕ್ಷಿ ದೇವಸ್ಥಾನದ ಸಭಾಂಗಣದಲ್ಲಿ ಮಣಿಪಾಲದ ಅಭಿಜ್ಞಾ ಎಜುಕೇಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಶ್ರಯದಲ್ಲಿ ಗುರುವಾರ […]