ಲೋಕಕಲ್ಯಾಣಕ್ಕಾಗಿ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞ ಶಾಲೆಯಲ್ಲಿ ಆಶ್ಲೇಷಾ ಬಲಿ, ನವ ಚಂಡಿಕಾಯಾಗ: ಶಿಕ್ಷಕರನ್ನು ಗೌರವಿಸಿದ್ದು ಶ್ರೇಷ್ಠ ಕಾರ್ಯ: ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ
ಹಿರಿಯಡ್ಕ: ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರದ ತನಕದ ಶಿಕ್ಷಕರನ್ನು ಗೌರವಿಸಿದ್ದು, ಶ್ರೇಷ್ಠ ಕೆಲಸ. ನಾನು ಯತಿ ದೀಕ್ಷೆ ಪಡೆದ ನಂತರ ನೋಡಿದ ಅದ್ಭುತ ಕಾರ್ಯಕ್ರಮಗಳಲ್ಲಿ ಇದೂ ಒಂದು. ಲೋಕಕಲ್ಯಾಣಕ್ಕಾಗಿ ಆಶ್ಲೇಷಾ ಬಲಿ, ನವ ಚಂಡಿಕಾಯಾಗ ವಿದ್ವಾನ್ ಅಜಿತ್ ಆಚಾರ್ಯ ಪಂಚನಬೆಟ್ಟು ನೇತೃತ್ವದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ. ನಾಡಿಗೆ ಶುಭವಾಗಲಿ ಎಂದು ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು. ಲೋಕ ಕಲ್ಯಾಣಕ್ಕಾಗಿ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞ ಶಾಲೆಯಲ್ಲಿ ನಡೆದ ಆಶ್ಲೇಷಾ ಬಲಿ, ನವ ಚಂಡಿಕಾಯಾಗದಲ್ಲಿ […]