ಗೃಹಪ್ರವೇಶಕ್ಕೆ ಬಂದವರಿಗೆಲ್ಲಾ ಒಂದೊಂದು ಗಿಡ ಕೊಟ್ಟರು: ಕಾರ್ಕಳದಲ್ಲಿ ಪರಿಸರ ಕಾಳಜಿ ಮೆರೆದ ಪರಿಸರ ಪ್ರೇಮಿಗಳು

ಪರಿಸರ ಪ್ರೀತಿ ಅನ್ನೋದು ನಮ್ಮಲ್ಲೇ ಹುಟ್ಟುವಂತದ್ದು. ತಮ್ಮ ಪರಿಸರದ ಬಗ್ಗೆ ಕಾಳಜಿ ಇರುವವರು ಹೇಗಾದರೂ ಮಾಡಿ ತಮ್ಮ ಪರಿಸರಕ್ಕೆ ಏನಾದರೂ ಕೊಡುಗೆ ನೀಡುತ್ತಲೇ ಇರುತ್ತಾರೆ. ಶನಿವಾರ  ಕಾರ್ಕಳದ ಸಾಣೂರಿನಲ್ಲಿ ಗೃಹಪ್ರವೇಶದ ಗೌಜಿ. ಗೃಹಪ್ರವೇಶದಲ್ಲಿ ಭಾಗವಹಿಸಿದರಿಗೆ ಸಿಹಿ,ಭೋಜನ ನೀಡುವುದು ಎಲ್ಲಾ ಕಡೆ ಮಾಮೂಲು, ಆದರೆ ಈ ಮನೆಯವರು ಬಂದವರಿಗೆ ಬಗೆಬಗೆಯ ಗಿಡಗಳನ್ನು ನೀಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಹೌದು ಶನಿವಾರ ಪುಲ್ಕೇರಿ ನವೀನ್ ಪ್ರಭು ಅವರ ಮನೆಯ ಗೃಹಪ್ರವೇಶದಲ್ಲಿ ಈ ನಾನಾ ವಿಧದ ಪರಿಸರಕ್ಕೆ ಪೂರಕವಾಗುವ ಗಿಡಗಳನ್ನು ವಿತರಿಸಲಾಗಿದ್ದು […]