ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿದೆ !ರಿಪೇರಿಯಾಗದಿದ್ದರೆ ಇನ್ನೇನು ಕುಸಿದು ಬೀಳತ್ತೆ ಪುತ್ತಿಗೆ ಸೇತುವೆ !

ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A  ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ  ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿ ತುಂಬಾ ಸಮಯವಾದರೂ ಅದನ್ನು ರಿಪೇರಿ ಮಾಡುವ ಗೋಜಿಗೆ ಈ ವರೆಗೆ ಯಾರೂ ಹೋಗಿಲ್ಲ.  ಹಾಗಾಗಿ ಸೇತುವೆಯೇ ಇನ್ನೇನು ಮುರಿದು ಕುಸಿತದ ಹಾದಿಯಲ್ಲಿದೆ. ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರ ಸ್ತಂಭಗಳು ಬೇರ್ಪಟ್ಟಿದೆ.  ಎರಡು ಆಧಾರ ಸ್ತಂಭಗಳು ಕೆಳಭಾಗದಲ್ಲಿ ಕುಸಿದಿದ್ದು ಜನರು ಸೇತುವೆಯ ಮೇಲೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.  1950 ರ ದಶಕದಲ್ಲಿ […]