ರಾಷ್ಟ್ರ ಮಟ್ಟದ ಅಂತರ್ ಜಿಲ್ಲಾ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅನುರಾಗ್

ಉಡುಪಿ: ಫೆ. 9 ರಿಂದ 12 ರವರೆಗೆ ಪಾಟ್ನಾ ಬಿಹಾರದಲ್ಲಿಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅಲೆವೂರು ಕೇಂದ್ರೀಯ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿ ಅನುರಾಗ್ ಜಿ. ಗುಂಡೆಸೆತ ಸ್ಪರ್ಧೆಯ 16 ವರ್ಷ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇವರು ಕಾರ್ಕಳ ಬಿ.ಎಸ್.ಎನ್.ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿಗಳ ಪುತ್ರ. ಇವರು ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ […]