ನಾರಿ ಶಕ್ತಿಗೆ ವಂದಿಸಿದ ಸಂಸತ್ : ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯ ಸರ್ವಾನುಮತದ ಅಂಗೀಕಾರ

ನವದೆಹಲಿ: ರಾಜ್ಯಸಭೆಯು ಗುರುವಾರ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು “ನಾರಿ ಶಕ್ತಿ ವಂದನ್” ಅಧಿನಿಯಮಕ್ಕೆ ಸಮ್ಮತಿ ದೊರೆತಿದೆ. ಸಂವಿಧಾನ (128 ನೇ ತಿದ್ದುಪಡಿ) ಮಸೂದೆ, ಅಥವಾ ನಾರಿ ಶಕ್ತಿ ವಂದನ್ ಅಧಿನಿಯಮ ಮತ್ತು ಅದರ ಆರು ಷರತ್ತುಗಳನ್ನು ಮೇಲ್ಮನೆಯಲ್ಲಿ ಹಾಜರಿದ್ದ ಎಲ್ಲಾ 214 ಸದಸ್ಯರು ಅದರ ಪರವಾಗಿ ಮತ ಚಲಾಯಿಸುವ ಮೂಲಕ ಅಂಗೀಕರಿಸಿದರು. ಮಸೂದೆಯನ್ನು ಅಂಗೀಕರಿಸಿದ ನಂತರ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ “ಐತಿಹಾಸಿಕ ಸಾಧನೆ” ಎಂದು ಬಣ್ಣಿಸಿದರು. ಮಸೂದೆ ಅಂಗೀಕಾರದ ಘೋಷಣೆಯನ್ನು ಸದಸ್ಯರು ಮೇಜು […]