ಅವಿಭಜಿತ ದ.ಕ ಜಿಲ್ಲೆಯಲ್ಲಿ ಧಾರಾಕಾರ ಮಳೆ; ಹೊಂಡ ಗುಂಡಿಯಿಂದ ಅಪಾಯಕ್ಕೆ ಆಹ್ವಾನವೀಯುತ್ತಿದೆ ರಾಷ್ಟ್ರೀಯ ಹೆದ್ದಾರಿ
ಉಡುಪಿ/ ಮಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಉಡುಪಿ ಹಾಗೂ ಮಂಗಳೂರಿನ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದಲ್ಲದೆ, ಅಲ್ಲಲ್ಲಿ, ಮರ-ಮನೆಮಟ್ಟುಗಳು ಉರುಳಿ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಇದರ ಜೊತೆಗೆ ಧಾರಾಕಾರ ಮಳೆಯಿಂದಾಗಿ ಮುಲ್ಕಿ-ಮಂಗಳೂರು ಹಾಗೂ ನಂತೂರು-ಬಿ.ಸಿ ರೋಡು ರಾ.ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನವೀಯುತ್ತಿದೆ. ಕುಂದಾಪುರ-ಉಡುಪಿ-ಮುಲ್ಕಿ ಮಾರ್ಗವಾಗಿ ಹಲವಾರು ವಾಹನಗಳು ಮಂಗಳೂರಿಗೆ ಪ್ರಯಾಣಿಸುತ್ತವೆ. ನಿತ್ಯ ಸಂಚಾರ ನಡೆಸುವ ಈ ವಾಹನಗಳು ರಾ.ಹೆದ್ದಾರಿಯ ಹೊಂಡ ಗುಂಡಿಗಳನ್ನು ತಪ್ಪಿಸಿಕೊಂಡು ಚಲಿಸಬೇಕಾದ ಪರಿಸ್ಥಿತಿ […]