ಕಾಪು: ಮಸೀದಿಯ ಬಾಗಿಲು ಒಡೆದು ನಮಾಜ್; ಐವರ ವಿರುದ್ಧ ಪ್ರಕರಣ ದಾಖಲು
ಕಾಪು: ಇಲ್ಲಿನ ಪೊಲಿಪು ಜಾಮೀಯ ಮಸೀದಿಯ ದರ್ಗಾದ ಬಾಗಿಲು ಒಡೆದು ಒಳನುಗ್ಗಿದ ತಂಡವೊಂದು ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಮಾಜ್ ಮಾಡಿ, ಮಸೀದಿಯ ಉಪಾಧ್ಯಕ್ಷರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಸೆ. 14ರಂದು ನಡೆದಿದೆ. ಸ್ಥಳೀಯರಾದ ರಶೀದ್, ಜಲೀಲ್, ಬಶೀರ್ ಜನಪ್ರಿಯ, ಬಶೀರ್ ಕರ್ನಾಟಕ ಹೋಟೆಲ್ ಹಾಗೂ ಅಶ್ರಫ್ ಅಕ್ರಮವಾಗಿ ಮಸೀದಿಯೊಳಗೆ ನುಗ್ಗಿ, ಉಪಾಧ್ಯಕ್ಷರಿಗೆ ಬೆದರಿಕೆ ಹಾಕಿದ ಆರೋಪಿಗಳು. ಇವರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲಿಪು ಮಸೀದಿಯಲ್ಲಿ ಸರಕಾರ ಮತ್ತು ವಕ್ಷ್ ಬೋರ್ಡ್‌ನ ಎಲ್ಲ ಸೂಚನೆಗಳನ್ನು ಪಾಲಿಸಿಕೊಂಡು […]