ರಾಜ್ಯಾಧ್ಯಕ್ಷನಾಗುವ ಬಗ್ಗೆ ನಿರೀಕ್ಷೆ ಇರಲಿಲ್ಲ; ಜವಾಬ್ದಾರಿಯಾಗಿ ಸ್ವೀಕರಿಸಿ ಮುಂದುವರಿಯುವೆ: ನಳೀನ್ ಕುಮಾರ್ ಕಟೀಲ್

ಮಂಗಳೂರು: ಬಾಲ್ಯದಿಂದಲೇ ಸಂಘ ಪರಿವಾರದ ಕಾರ್ಯಕರ್ತನಾಗಿದ್ದುಕೊಂಡು ಬೆಳೆದು ಬಂದಿದ್ದೇನೆ. ಸವಾಲುಗಳ ಮಧ್ಯೆ ಈಜುತ್ತಲೇ ಇಲ್ಲಿಯವರೆಗೆ ತಲುಪಿದ್ದೇನೆ. ಆದರೆ ಯಾವುದೇ ಪದವಿಯ ಅಪೇಕ್ಷೆಯಾಗಲಿ, ನಿರೀಕ್ಷೆಯಾಗಲಿ ಮಾಡಿಲ್ಲ. ಪಕ್ಷದ ನಾಯಕರು ಹಾಗೂ ಹಿರಿಯರ ಸೂಚನೆಯಂತೆ ನೀಡಲಾಗಿರುವ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಹುದ್ದೆಯಾಗಿ ಅಲ್ಲ, ಜವಾಬ್ಧಾರಿಯಾಗಿ ಸ್ವೀಕರಿಸಲಿದ್ದೇನೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿ, ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಂಘದ ವಿಚಾರಧಾರೆಯೊಂದಿಗೆ ಬೆಳೆದ ನಾನು […]