149 ಪ್ರಯಾಣಿಕರಿದ್ದ ವಿಮಾನ ಪತನ
ನೈರೋಬಿ: 149 ಪ್ರಯಾಣಿಕರು ಹಾಗೂ 8 ಮಂದಿ ಸಿಬಂದಿಯನ್ನೊಳಗೊಂಡ ‘ಇಥಯೋಪಿಯನ್’ ಇಂದು (ಮಾ.10) ಬೆಳಿಗ್ಗೆ 8.44ಕ್ಕೆ ಪತನಗೊಂಡಿದೆ. ರವಿವಾರ ಅಡ್ಡಿಸ್ ಅಬಾಬದಿಂದ ಕೆಲವೇ ಕಿಮೀ ದೀರದಲ್ಲಿರುವ ಬಿಶೋಪ್ತು ಪಟ್ಟಣದಲ್ಲಿ ಪತನಗೊಂಡಿದೆ. ಪತನಗೊಂಡಿರುವ ವಿಮಾನ ಇಟಿ 302 ಎಂದು ವಿದೇಶಿ ಮಾದ್ಯಮಗಳು ವರದಿ ಮಾಡಿವೆ.