346 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಶ; ದಂಡವಸೂಲಿ: ನಗರಸಭೆ ಅಧಿಕಾರಿಗಳಿಂದ ಕಾರ್ಯಾಚರಣೆ
ಉಡುಪಿ: ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಆದಿ ಉಡುಪಿ ಎ.ಪಿ.ಎಮ್.ಸಿ ಮಾರುಕಟ್ಟೆ ಬಳಿ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಮಾರುತಿ ಓಮಿನಿ ವಾಹನದ ಮೇಲೆ ದಾಳಿ ನಡೆಸಿ 346 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 10,000 ರೂ. ದಂಡ ಹಾಗೂ ಅಜ್ಜರಕಾಡು ಪಾರ್ಕ್ ರಸ್ತೆ ಬಳಿ ತ್ಯಾಜ್ಯವನ್ನು ಸುಡುತ್ತಿರುವವರಿಗೆ 5000 ರೂ. ದಂಡ ವಿಧಿಸಿದರು. ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಸ್ಯಾನೀಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು […]
ನ. 28 ರಂದು ನಗರಸಭೆಯ ಸಾಮಾನ್ಯ ಸಭೆ
ಉಡುಪಿ: ಉಡುಪಿ ನಗರಸಭೆಯ ಸಾಮಾನ್ಯ ಸಭೆಯು ನವೆಂಬರ್ 28 ರಂದು ಬೆಳಗ್ಗೆ 10.30 ಕ್ಕೆ ಕಚೇರಿಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ನವೆಂಬರ್ 25 ರಂದು ಕುಂದಾಪುರ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಬೆಳಗ್ಗೆ 10.30 ಕ್ಕೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿರುವರು. ಗ್ರಾಹಕರು ದೂರವಾಣಿ ಸಂಖ್ಯೆ: 08254-230490 ಅನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಉಡುಪಿ: ವೃತ್ತಗಳ ಮರು ನಾಮಕರಣ; ರಾಜ್ಯ ಸರ್ಕಾರ ಆದೇಶ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964-211ರ ಅನ್ವಯ ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಬನ್ನಂಜೆ ವೃತ್ತವು ನಾರಾಯಣಗುರು ವೃತ್ತ, ಕಲ್ಸಂಕ ವೃತ್ತವು ಮಧ್ವಾಚಾರ್ಯ ವೃತ್ತ, ಡಯಾನಾ ವೃತ್ತವು ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಅನ್ನು ಕೋಟಿ ಚೆನ್ನಯ್ಯ ವೃತ ಹಾಗೂ ಬ್ರಹ್ಮಗಿರಿ ದೊಡ್ಡ ವೃತ್ತವು ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ. ಪರ್ಕಳದಿಂದ ಕೋಡಂಗೆ ಹಾಗೂ […]
ಸೇನರ ಜಿಡ್ದ ಮಾರ್ಗಕ್ಕೆ ಅರುಣಾಬ್ಜ ಮಾರ್ಗ ನಾಮಕರಣ: ಆಕ್ಷೇಪಣೆ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಿಂದ ಸೇನರ ಜಿಡ್ದಕ್ಕೆ ಹೋಗುವ ಮಾರ್ಗಕ್ಕೆ ಕವಿ ಅರುಣಾಬ್ಜ ಮಾರ್ಗ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಸಿಟಿ ಬಸ್ ನಿಲ್ದಾಣ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ: ಆಕ್ಷೇಪಣೆ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣದಿಂದ ನರ್ಮ್ ಬಸ್ ಸ್ಟ್ಯಾಂಡ್ ಬಳಿಯಿಂದ ಸರ್ವೀಸ್ ಬಸ್ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿರುವ ವೃತ್ತಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡುವ ಕುರಿತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಇವರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.