ಪೋಕ್ಸೊ ವಿಶೇಷ ಕಾಯ್ದೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ರದ್ದುಗೊಳಿಸುತ್ತದೆ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯು ಲೈಂಗಿಕತೆಗೆ ಒಪ್ಪಿಗೆ ನೀಡುವ ವಯಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಅತಿಕ್ರಮಿಸುತ್ತದೆ ಮತ್ತು ಆದ್ದರಿಂದ, ಮದುವೆಯ ನಂತರ ಅಪ್ರಾಪ್ತ ಮುಸ್ಲಿಂ ಹುಡುಗಿಯೊಂದಿಗಿನ ಲೈಂಗಿಕತೆಗೆ ಪೋಕ್ಸೊ ಕಾನೂನಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ[ಅಲೀಂ ಪಾಷಾ ವಿರುದ್ಧ ಕರ್ನಾಟಕ ರಾಜ್ಯ]. ಹೈಕೋರ್ಟಿನ ಏಕಸದಸ್ಯ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರು ಮುಸ್ಲಿಂ ಕಾನೂನಿನ ಪ್ರಕಾರ ಅಪ್ರಾಪ್ತ ಬಾಲಕಿಗೆ 15 ವರ್ಷ ತುಂಬಿದ ನಂತರ ಮದುವೆಯಾಗಬಹುದು ಮತ್ತು ಅಂತಹ […]