ಮಂಗಳೂರು: ವಾಮಂಜೂರಿನಲ್ಲಿ ಅಣಬೆ ಕಾರ್ಖಾನೆ ವಿರುದ್ದ ಸಾರ್ವಜನಿಕರಿಂದ ಧರಣಿ
ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರು ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣಬೆ ಕಾರ್ಖಾನೆಯಿಂದ ಆರೋಗ್ಯ ಹಾನಿಯಾಗುತ್ತಿರುವ ವಿರುದ್ದ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಗುರುವಾರದಂದು ಇಲ್ಲಿನ ವ್ಯಾಪಾರಿಗಳು ಅರ್ಧ ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಅಣಬೆ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿ ನಿವಾಸಿಗಳು ಸ್ಥಳೀಯ ಗ್ರಾಮಸ್ಥ ರಿಯಾಜ್ ಅಹಮದ್ ಅವರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದು, ಸುಮಾರು 190 ಮನೆಗಳಿರುವ ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಯೊಳಗೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದ್ದು, ಅಣಬೆ ಕಟಾವು […]