ಮಂಗಗಳ‌ ಮಾರಣಹೋಮ ಪ್ರಕರಣ: ದಂಪತಿ ಸಹಿತ ಐವರ ಬಂಧನ

ಹಾಸನ: ಇಡೀ ರಾಜ್ಯದಲ್ಲೇ ತಲ್ಲಣಗೊಳಿಸಿದ್ದ ಮಂಗಗಳ ಮಾರಣಹೋಮ ಪ್ರಕರಣವನ್ನು ಭೇದಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ದಂಪತಿ ಸಹಿತ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಗನೆ ಗ್ರಾಮದ ಜಮೀನು‌ ಮಾಲೀಕರಾದ ಪ್ರಸನ್ನ, ರುದ್ರೇಗೌಡ, ವಾಹನ ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ ಸತ್ಯ ಬಾಯಿಬಿಟ್ಟಿದ್ದು, ‘ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ […]