ಹಾಡಹಗಲೇ ಬ್ಯಾಂಕ್ ನೊಳಗೆ ವ್ಯಕ್ತಿಯ ಹತ್ಯೆ

ಬೆಂಗಳೂರು: ಬ್ಯಾಂಕ್ ನಲ್ಲಿಯೇ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳ ತಂಡ ಮಚ್ಚಿನಿಂದ ಹಲ್ಲೆಗೈದು ಕೊಲೆ ಮಾಡಿದ ಘಟನೆ ಕೋರಮಂಗಲದ ಯೂನಿಯನ್​ ಬ್ಯಾಂಕ್​ನಲ್ಲಿ ಇಂದು ನಡೆದಿದೆ. ಕೋರಮಂಗಲ 8ನೇ ಬ್ಲಾಕ್ ಯೂನಿಯನ್ ಬ್ಯಾಂಕ್ ನಲ್ಲಿ ರೌಡಿಶೀಟರ್ ಬಬ್ಲಿ ತನ್ನ ಪತ್ನಿ ಜೊತೆ ಬ್ಯಾಂಕ್‌ಗೆ ಆಗಮಿಸಿದ್ದನು. ಈ ವೇಳೆ ಬ್ಯಾಂಕ್‌ ನೊಳಗೆ ನುಗ್ಗಿದ ಕೆಲ ಕಿಡಿಗೇಡಿಗಳು, ಬಬ್ಲಿಯನ್ನು ಅಟ್ಯಾಕ್ ಮಾಡಿ ಹತ್ಯೆಗೈದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಆಗ್ನೇಯ ವಿಭಾಗ ಡಿಸಿಪಿ‌‌ ಜೋಷಿ‌ ಶ್ರೀನಾಥ್ ಮಹದೇವ್ ಪರಿಶೀಲನೆ ನಡೆಸುತ್ತಿದ್ದಾರೆ.