ಕಾರ್ಕಳ ಮಂಡ್ಕೂರಿನಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತಯಾಚನೆ: ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗುವಂತೆ ವಿನಂತಿ
ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಚುನಾವಣಾ ಪ್ರಚಾರ ನಡೆಸಿದರು.ಮುಂಡ್ಕೂರು, ಬೆಳ್ಮಣ್, ಸಚ್ಚರಿಪೇಟೆಯ ಭಾಗದ ಮನೆ ಮನೆಗೂ ತೆರಳಿ ಕಾರ್ಕಳದ ಅಭಿವೃದ್ಧಿಗೆ ತನ್ನ ಕನಸುಗಳೇನು ಎಂಬುದನ್ನು ಜನತೆಗೆ ಮನವರಿಕೆ ಮಾಡಿ, ಕಾರ್ಕಳದಲ್ಲಿ ಈ ಸಲ ಮತ ನೀಡಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗುವಂತೆ ಕೇಳಿಕೊಂಡರು.