ಬಾಲರೋಗ ಮತ್ತು ಪ್ರಸೂತಿತಂತ್ರ ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರ

ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತುಆಸ್ಪತ್ರೆಯ ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗದ ವತಿಯಿಂದ ಮೇ 23 ರಿಂದ 28 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00 ಘಂಟೆಯವರೆಗೆ ಮಕ್ಕಳ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ, ಹಾಗೂ ಮಾಹಿತಿ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

16 ವರ್ಷದೊಳಗಿನ ಮಕ್ಕಳಿಗೆ ಮೇ 8 ರಂದು ಮುನಿಯಾಲು ಸ್ವರ್ಣಪ್ರಾಶನ

ಕಾರ್ಕಳ: ಮಕ್ಕಳ ಸ್ವಾಸ್ಥ್ಯ ರಕ್ಷಣೆ ಹಾಗೂ ವ್ಯಾಧಿ ಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಆಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯಪ್ರಾಶನದ ಬಿಂದುಗಳನ್ನು 16 ವರ್ಷದೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯ ನಕ್ಷತ್ರವಾದ ಮೇ 8 ರಂದು ನೀಡಲಾಗುತ್ತಿದೆ. ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ […]

ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕದಿಂದ ಕಾರ್ಯಕ್ರಮ

ಮುನಿಯಾಲು: ಗುರುವಾರದಂದು ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಯುನಿಸೆಫ್ ಸಹಭಾಗಿತ್ವದಲ್ಲಿ ‘ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳನ್ನು ಪಡೆಯಲು ಸಮುದಾಯಗಳಲ್ಲಿ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಎನ್. ಎಸ್. ಎಸ್. ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆ ಯೋಜನೆ’ ಕಾರ್ಯಕ್ರಮ ನಡೆಯಿತು. ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಡಾ. ಸುದೀಪ ಇವರು ಎನ್. ಎಸ್. ಎಸ್. ಮಹತ್ವ ಮತ್ತು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು. […]

ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರ

ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗದ ವತಿಯಿಂದ ದಿನಾಂಕ 25.04.2022 ರಿಂದ 30.04.2022 ರವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 4.00 ಘಂಟೆಯವರೆಗೆ ಮಕ್ಕಳ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ, ಹಾಗೂ ಮಾಹಿತಿ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.