ಮುನಿಯಾಲ್ ಆಯುರ್ವೇದ ಆಸ್ಪತ್ರೆ ವತಿಯಿಂದ ಮಹಿಳೆಯರ ಋತುಚಕ್ರದ ಸಮಸ್ಯೆಗಳ ಉಚಿತ ಚಿಕಿತ್ಸಾ ಶಿಬಿರ
ಮಣಿಪಾಲ: ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಇಪ್ಪತ್ತೈದು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರಪದ್ದತಿಯಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ. ಇದೇ ನಿಟ್ಟಿನಲ್ಲಿ ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗವಾಗಿ ಆಗಸ್ಟ್ 1 ರಿಂದ 7 ವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ಮಹಿಳೆಯರ ಋತುಚಕ್ರದ ಸಮಸ್ಯೆಗಳ ಚಿಕಿತ್ಸಾ ಶಿಬಿರ-“ಸೌಭಾಗ್ಯ ಕಲ್ಪ”ವನ್ನು ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ಆಯೋಜಿಸಲಾಗಿದೆ. […]