ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್ ಟಾಟಾ ಆಯ್ಕೆ
ಮುಂಬೈ: ಸಮಸ್ತ ಟಾಟಾ ಸಮೂಹವನ್ನು ನಿರ್ವಹಿಸುವ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್ ಟಾಟಾ (67) ಅವರನ್ನು ಆಯ್ಕೆ ಮಾಡಲಾಗಿದೆ. ಇದುವರೆಗೂ ಈ ಸ್ಥಾನದಲ್ಲಿದ್ದ ರತನ್ ಟಾಟಾ ಅವರ ನಿಧನದ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಟಾಟಾ ಟ್ರಸ್ಟ್‌ನ ಆಡಳಿತ ಮಂಡಳಿ, ರತನ್ ಅವರ ಮಲಸೋದರ ನೊಯೆಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಯೆಲ್ ಟಾಟಾ, ‘ರತನ್ ಟಾಟಾ ಮತ್ತು ಟಾಟಾ ಗ್ರೂಪ್‌ನ ಸಂಸ್ಥಾಪಕರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನಾನು […]