ನಿಫ್ಟಿ 94, ಬಿಎಸ್‌ಇ ಸೆನ್ಸೆಕ್ಸ್ 241 ಅಂಕ ಏರಿಕೆ
ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯ ಮಧ್ಯೆ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶಗಳು ಸಕಾರಾತ್ಮಕವಾಗಿರುವ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಸತತ ಎರಡನೇ ಅವಧಿಗೆ ಏರಿಕೆ ಕಂಡವು. ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 240.98 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಏರಿಕೆ ಕಂಡು 65,628.14ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 296.75 ಪಾಯಿಂಟ್ ಅಥವಾ ಶೇಕಡಾ 0.45 […]