ಸೆನ್ಸೆಕ್ಸ್​ 152 & ನಿಫ್ಟಿ 47 ಅಂಕ ಏರಿಕೆ ; ರಿಲಯನ್ಸ್, ಐಟಿಸಿ, ಇನ್ಫೋಸಿಸ್ ಖರೀದಿ ಅಬ್ಬರ

ಮುಂಬೈ: ಮಂಗಳವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ. ಜಾಗತಿಕ ಷೇರುಗಳಲ್ಲಿನ ಮಂದಗತಿಯ ಪ್ರವೃತ್ತಿಯ ಮಧ್ಯೆ ಮಾರುಕಟ್ಟೆಯ ದೊಡ್ಡ ಕಂಪನಿಗಳಾದ ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್​​ ಷೇರುಗಳ ಖರೀದಿಯಲ್ಲಿನ ಹೆಚ್ಚಳದಿಂದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಸತತ ಮೂರನೇ ದಿನವೂ ಏರಿಕೆ ಕಂಡವು.ಇದಲ್ಲದೇ, ದೃಢವಾದ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶವು ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸಿದೆ ಎಂದು ಹೂಡಿಕೆದಾರರು ತಿಳಿಸಿದ್ದಾರೆ. ಬಿಎಸ್‌ಇ ಬೆಂಚ್​ಮಾರ್ಕ್ ಸೂಚ್ಯಂಕವು 152.12 ಪಾಯಿಂಟ್ ಅಥವಾ ಶೇಕಡಾ […]