ಉಡುಪಿ: ನಾಯಿ ಕೊಂದ ಆರೋಪಿಯ ಬಂಧನ

ಮಲ್ಪೆ: ಏರ್ ಗನ್ ನಿಂದ ಶೂಟ್ ಮಾಡಿ ನಾಯಿಯನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೆಮ್ಮಣ್ಣುವಿನ ಬ್ರಾನ್ ಡಿಸೋಜ (50) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಬೆಳಿಗ್ಗೆ ಕೆಮ್ಮಣ್ಣು ಗುಂಡಪ್ಪ ಪೂಜಾರಿ ಎಂಬುವವರ ಸಾಕು ನಾಯಿಯನ್ನು ಏರ್ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದನು ಎಂದು ದೂರು ದಾಖಲಾಗಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಮಲ್ಪೆ ಪೊಲೀಸರು, ಆತನನ್ನು ಬಂಧನ ಮಾಡಿದ್ದಾರೆ.