ಮಲ್ಪೆ: ಚಾಲಕನ ನಿಯಂತ್ರಣ ತಪ್ಪಿ ದಕ್ಕೆಗೆ ಬಿದ್ದ ಆಟೊ; ಚಾಲಕ ಪ್ರಾಣಾಪಾಯದಿಂದ ಪಾರು
ಮಲ್ಪೆ: ಚಾಲಕ ನಿಯಂತ್ರಣ ತಪ್ಪಿ ಆಟೊ ರಿಕ್ಷಾವೊಂದು ದಕ್ಕೆಗೆ ಬಿದ್ದ ಘಟನೆ ಮಲ್ಪೆ ಬಂದರಿನಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಆಟೊ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಲ್ಪೆ ಆಟೊ ನಿಲ್ದಾಣದ ಚಂದ್ರ ಸುವರ್ಣ ಎಂಬವರ ಆಟೊ ನಿಯಂತ್ರಣ ಕಳೆದುಕೊಂಡು ದಕ್ಕೆಯ ನೀರಿಗೆ ಬಿದ್ದಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಈಜುತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕ್ರೈನ್ ಮೂಲಕ ಆಟೊವನ್ನು ಮೇಲೆತ್ತಲಾಯಿತು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.