ಮುಲ್ಲಡ್ಕ: ವೃದ್ಧ ನಾಪತ್ತೆ

ಉಡುಪಿ: ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ ನಿವಾಸಿ ದೂಜ (70) ಎಂಬ ವ್ಯಕ್ತಿಯು ಮೇ 9 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಮುಂಡ್ಕೂರು ಪೇಟೆಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ ಹೊಂದಿದ್ದು, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.