ಮೂಡಬಿದ್ರೆ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ನಾಮಪತ್ರ ಸಲ್ಲಿಕೆ: ಕಾರ್ಯಕರ್ತರಿಗೆ ಅಭಿನಂದನೆ

ಮೂಡಬಿದ್ರೆ: ಮಂಗಳವಾರ ಮೂಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಉಮಾನಾಥ್ ಕೋಟ್ಯಾನ್ ಮೂಲ್ಕಿ ಮೂಡುಬಿದಿರೆಯ ಜನಸೇವೆಗಾಗಿ ಮೂರನೇ ಬಾರಿಗೆ ನಾಮಪತ್ರವನ್ನು ಸಲ್ಲಿಸುತ್ತಿದ್ದು ಈ ಸದಾವಕಾಶ ಮತ್ತು ಸುಯೋಗಕ್ಕೆ ಕಾರಣವಾದ ಭಾರತೀಯ ಜನತಾ ಪಾರ್ಟಿ ಹಾಗೂ ಪಕ್ಷದ ಎಲ್ಲಾ ನಾಯಕರುಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾಗರೋಪಾದಿಯಲ್ಲಿ ಆಗಮಿಸಿ ಮೂಡುಬಿದಿರೆಯನ್ನು ಕೇಸರಿಮಯಗೊಳಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳು, ಜೊತೆಗೆ, ಈ ಸಮಾವೇಶಕ್ಕೆ ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ […]