ಮಂಗನ ಕಾಯಿಲೆ ಭೀತಿ ಇಂದ್ರಾಳಿ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಂಗನಕಾಯಿಲೆ ಭೀತಿ ಆವರಿಸಿದ ಹಿನ್ನಲೆಯಲ್ಲಿ ಜನರಿಗೆ ಹಾಗೂ ಮಂಗಗಳಿಗೆ ರಕ್ಷಣೆ ನೀಡುವಂತೆ ಕೋರಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮುಖ್ಯಪ್ರಾಣನ ಮೊರೆ ಹೋಗಿದೆ. ಇಂದ್ರಾಳಿಯ ಪ್ರಸಿದ್ದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಇಂದು ಮಂಗನ ಕಾಯಿಲೆ ಯಾರಿಗೂ ಬಾಧಿಸದಿರಲಿ ಹಾಗೂ ಕಾಯಿಲೆ ದೂರವಾಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು , ಬಡಗಬೆಟ್ಟು ಕ್ರೆಡಿಟ್ ಕೋ_ ಅಪರೇಟಿವ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ […]