ಸಗ್ರಿಯ ವಾಸುಕಿ ದೇಗುಲದ ನಾಗಮಂಡಲೋತ್ಸವದ ಪೂರ್ವಬಾವಿ ಚಪ್ಪರ ಮುಹೂರ್ತ

ಉಡುಪಿಯ ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8ರಿಂದ ನಡೆಯಲಿರುವ ನವನಿರ್ಮಿತ ಶಿಲಾಮಯ ನಾಗದೇವರ ಗುಡಿ ಸಮರ್ಪಣೆ, ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವಕ್ಕೆ ಭೂಮಿ ಪೂಜಾ ಪೂರ್ವಕ ಚಪ್ಪರ ಮುಹೂರ್ತವು ಬುಧವಾರ ನೆರವೇರಿತು. ಪ್ರೇಮಚಂದ್ರ ಐತಾಳ್ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪ್ರಸನ್ನಕುಮಾರ್ ರಾವ್, ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಿಟ್ಟೂರು ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರಾದ ಗಿರಿಧರ ಆಚಾರ್ಯ, ಗೀತಾ ಶೇಟ್, ಮುಖ್ಯ ಅತಿಥಿಗಳಾಗಿ […]