ಮೂಡುಬಿದಿರೆ: ಬಾತ್ ರೂಮ್ ಗೀಸರ್ ನಿಂದ ವಿಷಾನಿಲ ಸೋರಿಕೆ – ಯುವಕ ಉಸಿರುಗಟ್ಟಿ ಮೃತ್ಯು.
ಮೂಡುಬಿದಿರೆ: ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕನೋರ್ವ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ. ಮೃತಪಟ್ಟ ಯುವಕ ಕೋಟೆಬಾಗಿಲಿನ ಫ್ಲ್ಯಾಟ್’ನಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ (18). ಶಾರಿಕ್ ರವಿವಾರ ರಾತ್ರಿ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ […]