ಆಳ್ವಾಸ್ ಕಾಲೇಜು: 2,406 ಮಂದಿಗೆ ಪದವಿ ಪ್ರದಾನ, ಪೋಷಕರ ತ್ಯಾಗ, ಒಡನಾಡಿಗಳ ಸ್ನೇಹ ಮರೆಯದೆ ಸಾಧಕರಾಗಲು ಪ್ರಯತ್ನಿಸಿ: ಡಾ. ಸಚ್ಚಿದಾನಂದ ಕಾಮತ್
ಮೂಡುಬಿದಿರೆ, ಮೇ 4: ಪ್ರತಿಯೊಬ್ಬರಿಗೂ ಸಾಧಿಸಬೇಕೆನ್ನುವ ಇಚ್ಚೆ ಇರುತ್ತದೆ. ಆದರೆ ಪೋಷಕರ ತ್ಯಾಗ, ವಾತ್ಸಲ್ಯ, ಗುರುಗಳ ಮಾರ್ಗದರ್ಶನ, ಒಡನಾಡಿಗಳ ಸ್ನೇಹ ಮರೆಯದೆ, ಪರಿಶ್ರಮ, ನೈತಿಕತೆ, ಸಮಾಜಋಣ ತೀರಿಸುವ ಮನೋಭಾವದಿಂದ ಸಾಧಕರಾಗಲು ಪ್ರಯತ್ನಿಸಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈಸ್‌ಛಾನ್ಸೆಲರ್ ಡಾ| ಸಚ್ಚಿದಾನಂದ್ ಹೇಳಿದರು. ವಿದ್ಯಾಗಿರಿಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ, ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ 2019ರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಶ್ರೇಷ್ಠತೆ […]