ಕಾರ್ಕಳ ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ‘ಎ’ ಗ್ರೇಡ್ ಮಾನ್ಯತೆ

ಕಾರ್ಕಳ: ದೇಶದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ಯಿಂದ ಎಂ.ಪಿ.ಎಂ ಸ.ಪ್ರ.ದ ಕಾಲೇಜಿನಲ್ಲಿ ಫೆಬ್ರವರಿ 1 ಮತ್ತು 2 ರಂದು ಸಮಗ್ರ ಮೌಲ್ಯಮಾಪನವು ನಡೆದು ಕಾಲೇಜಿಗೆ ‘ಎ’ ಗ್ರೇಡ್ ಮಾನ್ಯತೆ ಲಭಿಸಿರುತ್ತದೆ. ಒಟ್ಟು ಸಿಜಿಪಿಎ 4 ರಲ್ಲಿ 3.21 ಅಂಕಗಳನ್ನು ಪಡೆದ ಈ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗ್ರ ಸ್ಥಾನಿಯಾಗಿರುತ್ತದೆ. ನ್ಯಾಕ್ ತಂಡದಲ್ಲಿ ಖ್ಯಾತ ಶಿಕ್ಷಣ ತಜ್ಞ, ಹಿಮಾಚಲ ಪ್ರದೇಶದ […]