ಪವನ್ ಕಲ್ಯಾಣ್ - ಸಾಯಿ ತೇಜ್ ನಟನೆಯ ’ಬ್ರೋ’ ಟ್ರೇಲರ್ ರಿಲೀಸ್
2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದೂ ಒಂದು. ಈ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ‘ಬ್ರೋ’ ತಮಿಳಿನ ‘ವಿನೋದಯ ಸೀತಂ’ ಚಿತ್ರದ ರಿಮೇಕ್ ಆಗಿದೆ. ಸಮುದ್ರಖನಿ ‘ಬ್ರೋ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಜುಲೈ 28 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಿಲೀಸ್ ಆಗಿರುವ ಟ್ರೇಲರ್ ಸದ್ಯ ಟ್ರೆಂಡಿಂಗ್ ಆಗಿದೆ. ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್ ಕಾಂಬೋದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಬ್ರೋ’. ಪವನ್ ಕಲ್ಯಾಣ್ ಮತ್ತು […]