‘ಕಿಚ್ಚ 46’ ಸಿನಿಮಾದ ಟೀಸರ್ ರಿಲೀಸ್, ರಗಡ್ ಲುಕ್‌ನಲ್ಲಿ ಕಿಚ್ಚ ಸುದೀಪ್ ಅಬ್ಬರ
ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾವನ್ನು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಒತ್ತಾಯಿಸುತ್ತಿದ್ದರು. ಇದೀಗ ನಟನ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ‘ಕಿಚ್ಚ 46’: ಸೋಷಿಯಲ್ ಮೀಡಿಯಾದಲ್ಲಿ ಬಹುಕಾಲದಿಂದ ‘ಕಿಚ್ಚ 46’ಎಂಬುದು ಟ್ರೆಂಡಿಂಗ್ ಆಗಿತ್ತು. ವಿಕ್ರಾಂತ್ ರೋಣ ಬಳಿಕ ಸುದೀಪ್ ಯಾವುದೇ ಸಿನಿಮಾ ಘೋಷಿಸಿರಲಿಲ್ಲ. ಸುಮಾರು ಏಳೆಂಟು ತಿಂಗಳಿಂದ ನಟನ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಸೇರಿದಂತೆ ಸಿನಿಗಣ್ಯರು ಕತೂಹಲ ವ್ಯಕ್ತಪಡಿಸಿದ್ದರು. ಈಗಾಗಲೇ ಹಲವು ಅಂತೆ […]