ಚಂದ್ರಯಾನ-3 ಉಡಾವಣೆ ಜುಲೈ13ರಂದು ಮಧ್ಯಾಹ್ನ 2.30ಕ್ಕೆ: ಇಸ್ರೋ ಘೋಷಣೆ
ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಜುಲೈ 13ರಂದು ಮುಹೂರ್ತ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಜುಲೈ 13ರಂದು ಮಧ್ಯಾಹ್ನ 2:30 ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ.ಇಸ್ರೋ ಮತ್ತೊಂದು ವಿಕ್ರಮಕ್ಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಚಂದ್ರಯಾನ ಸರಣಿಯ ಮೂರನೇ ನೌಕೆಯನ್ನು ನಭಕ್ಕೆ ಹಾರಿಸಲಿದೆ. ಇದು ಲ್ಯಾಂಡರ್ ಮತ್ತು ರೋವರ್ ಮಾದರಿಯನ್ನು […]