ಮೂಡಬಿದಿರೆ: ಜನರ ಸಮಸ್ಯೆಗೆ ಸ್ಪಂಧಿಸದ ಅಧಿಕಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ತರಾಟೆ

ಮೂಡಬಿದಿರೆ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ನೀಡದ ಮೂಡಬಿದಿರೆ ನಾಡಕಚೇರಿಯ ಅಧಿಕಾರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಾರ್ವಜನಿಕರ ಕುಂದು ಕೊರತೆ ನೀಗಿಸಲು ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕರು ಏಕಾಏಕಿ ಮೂಡಾ ಕಚೇರಿಗೆ ತೆರಳಿದ್ದಾರೆ.  ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಂತದ್ದನ್ನು ಕಂಡ ಶಾಸಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತನ್ನ ರೌದ್ರಾವತಾರ ತೋರಿದ್ದಾರೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಅವರ ಸಮಸ್ಯೆ ಕೇಳುವವರಿಲ್ಲ. […]

ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥ ಶೆಟ್ಟಿ ಹೃದಯಘಾತದಿಂದ ಸಾವು: ಕಂಬಳ ದಿಗ್ಗಜ ಇನ್ನು ನೆನಪು ಮಾತ್ರ

ಮೂಡಬಿದಿರೆ: ತುಳುನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥಶೆಟ್ಟಿ (೫೪) ಅವರು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೊಕ್ಕಾಡಿಗೊಳಿಯಲ್ಲಿ ನಡೆದ ಜೋಡುಕರೆ ಕಂಬಳದಿಂದ ವಾಪಾಸಾಗುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಬಳದ ಕೋಣಗಳ ಯಜಮಾನರಾಗಿ, ಕಂಬಳದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿದ ಕೀರ್ತಿ ಅವರದು. ಕೋಣಗಳಿಗಾಗಿ ಈಜುಕೊಳ, ಆಧುನಿಕ ಮಾದರಿಯ ಸೌಲ`ಗಳನ್ನು ಕಲ್ಪಿಸಿ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಲ್ಲಿ ಅವರ ಕೋಣಗಳು ಚ್ಯಾಂಪಿಯಾನ್ […]