ಮೂಡುಬಿದಿರೆ: ಶಾಂಭವಿ ನದಿಗೆ ಈಜಲು ಇಳಿದ ಯುವತಿ ಸಹಿತ ನಾಲ್ವರು ನೀರುಪಾಲು

ಮೂಡುಬಿದಿರೆ: ಮದುವೆಗೆ ಬಂದಿದ್ದ ನಾಲ್ವರು ನದಿಯಲ್ಲಿ ಮುಳುಗಿ‌ ಮೃತಪಟ್ಟ ಘಟನೆ ಮೂಡುಬಿದಿರೆ ಪಾಲಡ್ಕ ಗ್ರಾಮದ ಕಡಂದಲೆಯ ಶಾಂಭವಿ ನದಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18) ಹಾಗೂ ಅರ್ಶಿತಾ( 20), ವೇಣೂರಿನ ಸುಭಾಷ್ (19), ಬಜ್ಪೆ ಪೆರಾರದ ರವಿ (30)‌ ಎಂದು ಗುರುತಿಸಲಾಗಿದೆ. ಈ ನಾಲ್ವರು ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆ ಸಮಾರಂಭದ ಬಳಿಕ ಶಾಂಭವಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎಂದು […]