ಮಾ.19: ಮಿನಿ ಉದ್ಯೋಗ ಮೇಳ

ಉಡುಪಿ: ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಇದರ ಆಶ್ರಯದಲ್ಲಿ ರಾಷ್ಟ್ರೀಯ ಪದವಿಪೂರ್ವ ವಿಧ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಂಘ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಇವರ ಜಂಟಿ ಸಹೋಗದೊಂದಿಗೆ ಮಿನಿ ಉದ್ಯೋಗ ಮೇಳವು ಮಾರ್ಚ್ 19 ರಂದು ಆದಿತ್ಯವಾರ‌ ಬೆಳಿಗ್ಗೆ 9.00 ಗಂಟೆಗೆ ಸ್ಥಳ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ (ಉಡುಪಿ ನಗರಸಭೆಯ ಹಿಂದೆ) ನಡೆಯಲಿದೆ. ಈ ಮಿನಿ ಉದ್ಯೋಗ ಮೇಳದಲ್ಲಿ ಸುಮಾರು ಹತ್ತು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಾರೆ. […]