ಮಾ.7: ಮೋದಿಕೇರ್‌ ವತಿಯಿಂದ ಆಜಾದಿ ಫೆಸ್ಟ್‌ ಮಹಿಳಾ ಸಬಲೀಕರಣ

ಉಡುಪಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮೋದಿಕೇರ್‌ ವತಿಯಿಂದ ಆಜಾದಿ ಫೆಸ್ಟ್‌ ಮಹಿಳಾ ಸಬಲೀಕರಣ ಸಂಭ್ರಮ ಮಾ.7ರಂದು ಬೆಳಿಗ್ಗೆ 10.30ಕ್ಕೆ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ. ಕಳೆದ 25 ವರ್ಷಗಳಿಂದ ನೇರ ಮಾರುಕಟ್ಟೆ ವ್ಯವಸ್ಥೆಯಡಿ ಮೋದಿಕೇರ್‌ ಸ್ವದೇಶಿ ಉತ್ಪನ್ನಗಳನ್ನು ಪೂರೈಸುತ್ತಿದ್ದು, ಗ್ರಾಹಕರಿಗೆ ಆರೋಗ್ಯಕರ ಬದುಕು ನೀಡಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ನೆರವಾಗಿದೆ ಎಂದು ಸಂಸ್ಥೆಯ ಕ್ರೌನ್‌ ಡೈಮಂಡ್‌ ನಿರ್ದೇಶಕ ಉದಯ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಕ್ರೌನ್‌ ಡೈಮಂಡ್‌ ನಿರ್ದೇಶಕ ರಾಘವೇಂದ್ರ ಶೆಟ್ಟಿ, ಹಿರಿಯ ಸೂಪರ್‌ […]