ಪ್ರಧಾನಿ ಮೋದಿ ಹಿಂದಿನವರಿಗಿಂತ ಭಿನ್ನ; ಅವರು ಭಯೋತ್ಪಾದನೆಯನ್ನು ಕಡೆಗಣಿಸುವುದಿಲ್ಲ ಅಥವಾ ಸಹಿಸುವುದಿಲ್ಲ: ಜೈಶಂಕರ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು, ವಿಶೇಷವಾಗಿ ಗಡಿಯಾಚೆಗಿನ ಆಕ್ರಾಮಕ ಸ್ವಭಾವವನ್ನು ಸಾಮಾನ್ಯವೆಂದು ಎಂದಿಗೂ ಪರಿಗಣಿಸುವುದಿಲ್ಲವೆಂದು ‘ಸ್ಫಟಿಕದಷ್ಟು ಸ್ಪಷ್ಟವಾಗಿ’ ಹೇಳಿದ್ದಾರೆ. ಈ ನಿರ್ಣಯವು 2014 ರಿಂದ ಈಚೆಗೆ ಪಾಕಿಸ್ತಾನದ ಬಗ್ಗೆ ಭಾರತದ ನೀತಿಯನ್ನು ರೂಪಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. “ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ಈ ಬಗ್ಗೆ ಬರೆದಿರುವ ಜೈಶಂಕರ್, 2015 ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾದ ನಂತರ ತಮ್ಮ ‘ಸಾರ್ಕ್ ಯಾತ್ರೆ’ಗೆ ಸಿದ್ಧವಾಗುತ್ತಿರುವಾಗ, ಮೋದಿ ನೀಡಿದ ಸೂಚನೆಗಳನ್ನು ನೆನಪಿಸಿಕೊಂಡಿದ್ದಾರೆ. “ನನ್ನ ಅನುಭವ […]