ಕೆಲಸದಲ್ಲಿ ವಿಳಂಬವಾಗುವುದೂ ಭ್ರಷ್ಟಾಚಾರ: ಸುನಿಲ್ ಕುಮಾರ್
ಕಾರ್ಕಳ : ಸರಕಾರಿ ನೌಕರರು ಜನಸೇವೆ ಮಾಡಲು ಹಣ ಪಡೆದುಕೊಂಡರೆ ಅದು ಭ್ರಷ್ಟಾಚಾರ. ಜತೆಗೆ ಕರ್ತವ್ಯದ ಕೆಲಸ ವಿಳಂಬವಾಗಿ ಮಾಡಿದರೂ ಭ್ರಷ್ಟಾಚಾರಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಅವರು ಹೇಳಿದರು. ಬೆಳ್ಮಣ್ ಜಿ.ಪಂ. ಕ್ಷೇತ್ರದ ಪಿಡಿಒ, ಗ್ರಾಮ ಲೆಕ್ಕಿಗರ ಹಾಗೂ ಇತರ ಪಂಚಾಯತ್ ಸಿಬಂದಿಗೆ ಡಿ. ೨೫ರಂದು ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ಪುನಶ್ಚೇತನ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಸರಕಾರಿ ನೌಕರರು ತಾವು ಮಾದರಿಯಾಗಿ, ಯಶಸ್ವಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದೆವೆಯೆ? […]