ಶಾಸಕ ರಘುಪತಿ ಭಟ್ ಅವರ ಹಡಿಲು ಭೂಮಿ ಆಂದೋಲನಕ್ಕೆ ಅಪಸ್ವರ: ಕಾಂಗ್ರೆಸ್ ನಾಯಕರಿಂದ ರೈತ ವಿರೋಧಿ ಹೇಳಿಕೆ; ಮಹೇಶ್ ಠಾಕೂರ್ ತಿರುಗೇಟು
ಉಡುಪಿ: ಶಾಸಕ ಕೆ.ರಘುಪತಿ ಭಟ್ ಅವರು ತಮ್ಮ ಕ್ಷೇತ್ರದಲ್ಲಿ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಈ ಬಗ್ಗೆ ಯೋಜನೆಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದು, ಇಡೀ ರಾಜ್ಯದಲ್ಲಿಯೇ ಯಾವ ಶಾಸಕನೂ ಮಾಡದ ಅವರ ಈ ವಿನೂತನ ಹೆಜ್ಜೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರವರು ಹೇಳಿಕೆ ನೀಡಿದ್ದಾರೆ. […]