ಪಾರಂಪರಿಕವಾದ ಸಂಪ್ರದಾಯಿಕ ಪದ್ದತಿ ಮೀನುಗಾರಿಕೆ: ಎಂ.ಜೆ. ರೂಪ
ಮಂಗಳೂರು: ಮೀನುಗಾರಿಕೆ ಎನ್ನುವುದು ಪಾರಂಪರಿಕವಾದ ಒಂದು ಸಂಪ್ರದಾಯಿಕ ಪದ್ದತಿ. ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಆಹಾರ ಮೂಲ. ಬಡ ಜನರಿಗೆ ಇದು ಶ್ರೀಮಂತ ಆಹಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲಿನ ಪೆಸಿಫಿಕ್-5ರ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ನಡೆದ ‘ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು. ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ ಎಂಬ ಕೈಪಿಡಿಯನ್ನು ಬಿಡುಗಡೆ […]