ಫೆ.10: ಮಿಷನ್ ಆಸ್ಪತ್ರೆಯ ಹೊಸ ಕ್ಯಾಂಪಸ್ ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್ ಉದ್ಘಾಟನೆ

ಉಡುಪಿ: ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಫೆ.10 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನೂತನ ಸಂಸ್ಥೆಯನ್ನು ರೆ.ಫಾ.ಹೇಮಚಂದ್ರ ಕುಮಾರ್ ಬಿಷಪ್ ಅವರು ಉದ್ಘಾಟಿಸಲಿದ್ದಾರೆ. ಲೊಂಬಾರ್ಡೋ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುನಿಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ ಎಂ, ಕಿನ್ನಿಮುಲ್ಕಿ ವಾರ್ಡ್‍ನ ಕೌನ್ಸಿಲರ್ […]

ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆ ಮಿಷನ್ ಆಸ್ಪತ್ರೆ: ಶತಮಾನೋತ್ಸವ ಸಂಭ್ರಮದಲ್ಲಿ ಫಾ.ಹೇಮಚಂದ್ರ ಕುಮಾರ್ ಅಭಿಮತ

ಉಡುಪಿ: ಸುಮಾರು ನೂರು ವರ್ಷಗಳ ಹಿಂದೆ ಅತ್ಯಂತ ಕಠಿಣ ಸಂದರ್ಭದಲ್ಲಿ ಪ್ರಾರಂಭವಾದ ಲೊಂಬಾರ್ಡ್(ಮಿಷನ್) ಆಸ್ಪತ್ರೆ ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ. ಡಾ ಈವಾ ಲೊಂಬಾರ್ಡ್ ಎಂಬ ಸ್ವಿಸ್ ಮಿಷನರಿ ವೈದ್ಯರು ಇಲ್ಲಿನ ಬಡ ಜನರಿಗಾಗಿ ಸ್ಥಾಪಿಸಿದ ಆಸ್ಪತ್ರೆಯು ಇಂದು ಶತಮಾನೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದು ಕೆ.ಎಸ್.ಡಿ ಬಿಷಪ್ ರ.ಫಾ ಹೇಮಚಂದ್ರ ಕುಮಾರ್ ಅಭಿಪ್ರಾಯ ಪಟ್ಟರು. ಅವರು ಗುರುವಾರದಂದು ಮಿಷನ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಿಷನ್ ಆಸ್ಪತ್ರೆಯು ಜನರ ನಾಡಿ ಮಿಡಿತ […]