71 ನೇ ವಿಶ್ವಸುಂದರಿ ಸ್ಪರ್ಧೆ: ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ
ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ ಅವರು 28 ವರ್ಷಗಳ ಅಂತರದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ (Miss World) 2024 ಸ್ಪರ್ಧೆಯ 71 ನೇ ಆವೃತ್ತಿಯನ್ನು ಗೆದ್ದಿದ್ದಾರೆ. ಮುಂಬೈನಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರಾಂಡ್ ಫಿನಾಲೆ ನಡೆಯಿತು. ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತೆ ಸಿನಿ ಶೆಟ್ಟಿ ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಪ್ರಪಂಚದಾದ್ಯಂತದ 112 ಸ್ಪರ್ಧಿಗಳನ್ನು ಒಳಗೊಂಡಿದ್ದ ಸ್ಪರ್ಧೆಯಲ್ಲಿ ಟಾಪ್ ಎಂಟರಲ್ಲಿ ಸಿನಿಶೆಟ್ಟಿ ಇದ್ದರೂ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಳ್ಳಲಾಗಲಿಲ್ಲ. […]
71ನೇ ವಿಶ್ವ ಸುಂದರಿ ಸ್ಪರ್ಧೆ: ಟಾಪ್ 20 ರಲ್ಲಿ ಸ್ಥಾನ ಪಡೆದುಕೊಂಡ ಸಿನಿ ಶೆಟ್ಟಿ
ಮುಂಬೈ: 71ನೇ ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ (Sini Shetty) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಶನಿವಾರ ನಡೆದ ಟಾಪ್ ಮಾಡೆಲ್ ಸ್ಪರ್ಧೆಯ ಚಿತ್ರಗಳನ್ನು ಸಿನಿ ಶೆಟ್ಟಿ ಹಂಚಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಟಾಪ್ 20 ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿರುವ ಸಿನಿ ಶೆಟ್ಟಿ ಕಪ್ಪು ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ. ಫ್ಯಾಷನ್ ಡಿಸೈನರ್ ರಾಕಿ ಸ್ಟಾರ್ ವಿನ್ಯಾಸಗೂಳಿಸಿದ ಕಪ್ಪು ಬಣ್ಣದ ಪೆಪ್ಲಮ್ ಗೌನ್ ಅನ್ನು ಸಿನಿ ಆಯ್ಕೆ ಮಾಡಿದ್ದಾರೆ. ಏಷ್ಯಾ ಎಂಡ್ ಓಷಿಯಾನಿಯಾದ ಅತ್ಯುತ್ತಮ ಡಿಸೈನರ್ ಡ್ರೆಸ್‌ಗಾಗಿ […]
71ನೇ ವಿಶ್ವ ಸುಂದರಿ ಸ್ಪರ್ಧೆಯ ಆತಿಥೇಯ ಪ್ರತಿನಿಧಿಯಾಗಿ ಜಗತ್ತನ್ನು ಸ್ವಾಗತಿಸಲಿದ್ದಾರೆ ಸಿನಿಶೆಟ್ಟಿ
ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ 71ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಸಿನಿಶೆಟ್ಟಿ ಆತಿಥೇಯ ಪ್ರತಿನಿಧಿಯಾಗಿದ್ದು ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ಘಳಿಗೆಗೋಸ್ಕರ ತುಂಬಾ ಸಮಯದಿಂದ ಕಾಯುತ್ತಿದ್ದೆ, ನಾನು ಆತಿಥೇಯ ಪ್ರತಿನಿಧಿಯಾಗಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಭಾರತಕ್ಕೆ ಸ್ವಾಗತಿಸಲು, ಭಾರತದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರದ ಪರಿಚಯವನ್ನು ಜಗತ್ತಿಗೆ ಪರಿಚಯಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. […]